ರಾಜಾ ಲಖಮಗೌಡ ಆಣೆಕಟ್ಟು ಅಥವಾ ಹಿಡಕಲ್ ಅಣೆಕಟ್ಟೆ ಕೃಷ್ಣಾ ನದಿಯ ಜಲಾನಯ ಪ್ರದೇಶಕ್ಕೆ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿದೆ. 62.48 ಮೀಟರ್ ಎತ್ತರ ಹೊಂದಿರುವ ಈ ಅಣೆಕಟ್ಟೆ, 10 ಲಂಬ ಕ್ರೆಸ್ಟ್ ಗೇಟ್ ಹೊಂದಿದೆ. ಒಟ್ಟು ಮೇಲ್ಮೈ ವಿಸ್ತೀರ್ಣ 63.38 ಚದರ ಕಿಲೋಮೀಟರ್ ಮತ್ತು 51.16 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಆಣೆಕಟ್ಟು 8,20,000 ಎಕರೆಗೂ ಹೆಚ್ಚು ನೀರಾವರಿ ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಜಲವಿದ್ಯುತ್ ಉತ್ಪಾದನೆಯನ್ನು ಪೂರೈಸುವ ಒಂದು ಅಣೆಕಟ್ಟು. ಇದನ್ನು ಘಟಪ್ರಭಾ ನೀರಾವರಿ ಯೋಜನೆಯ ಭಾಗವಾಗಿ ನಿರ್ಮಿಸಲಾಗಿದೆ, ಇದು ಮೂರು ಹಂತಗಳಲ್ಲಿ ಪೂರ್ಣಗೊಂಡಿದೆ. 2009 ರಲ್ಲಿ ಈ ಆಣೆಕಟ್ಟು ಕೊನೆ ಹಂತದಲ್ಲಿ ಪೂರ್ಣಗೊಂಡಿತು. ಅಣೆಕಟ್ಟಿಗೆ ವಂಟಮುರಿ ಜಮೀನ್ದಾರ್ ವಂಶಸ್ಥ ರಾಜಾ ಲಖಮಗೌಡ ಸರದೇಸಾಯಿ, ಅವರ ಹೆಸರಿಡಲಾಗಿದೆ.